Showing posts with label ನಾ ಓದಿದ ಪುಸ್ತಕಗಳು. Show all posts
Showing posts with label ನಾ ಓದಿದ ಪುಸ್ತಕಗಳು. Show all posts

Friday, 28 October 2011

ಜ್ಯೋತಿ-ಕಿರಣ

" ಜ್ಯೋತಿ-ಕಿರಣ" ಕೌಟುಂಬಿಕ ಪಾತ್ರಗಳನ್ನಳಗೊಂಡು ಪದ್ಮ ಶ್ರೀಧರ್ ರವರಿಂದ ರಚಿತವಾಗಿರುವ ಸಾಮಾಜಿಕ ಕಾದಂಬರಿ. ಯೌವನಕ್ಕೆ ಪದಾರ್ಪಣೆ ಮಾಡಿ, ಅರೆಬರೆ ತಿಳುವಳಿಕೆಯ ಹುಡುಗಿಯೊಬ್ಬಳು(ಕಥಾ ನಾಯಕಿ-ಪೂರ್ಣಿಮಾ), ಯುವಕನೊಬ್ಬನ ಪ್ರೀತಿಯ  ಸೆಳತಕ್ಕೆ ಸಿಕ್ಕಿಬಿದ್ದು, ಅವನನ್ನು ಪ್ರೀತಿಸುವುದಲ್ಲದೇ ಅವನ ಕಾಮದ  ಆಸೆಗೆ ಮಣಿದು, ಅವನನ್ನು ನಂಬಿ, ಅವನಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾಳೆ. ನಂತರ ಹಿರಿಯರ ಮಧ್ಯಸ್ತಿಕೆಯಿಂದ ಹೇಗೋ ಮದುವೆಯಾಗುತ್ತಾಳೆ, ಆದರೆ ಅವಳ ಬಾಳ ಪಯಣದ ಅರಂಭವೇ ನಿರಾಸೆಯನ್ನುಂಟು ಮಾಡುತ್ತದೆ. ಅವಳ  ಆಸೆ-ಆಕಾಂಕ್ಷೆಗಳು ಕುಸಿಯುತ್ತವೆ. ಬಾಳು ಪ್ರಾರಂಭವಾಗುವ ಮೊದಲೇ ಮುಗಿದು ಹೊಗುವ ಸಂಭವಗಳು ಎದುರಾಗುತ್ತವೆ. ಕಥಾನಾಯಕ ಚಂದ್ರನಿಗೆ ಅವಳ ಮೇಲಿನ ಆಕರ್ಷಣೆ ಕಡಿಮೆಯಾದ ನಂತರ ಅವಳನ್ನು ತಿರಸ್ಕಾರದಿಂದ ನೋಡುತ್ತಾನೆ. ಅವಹೇಳನ ಮಾಡುತ್ತಾನೆ. ಅವಳ ನಡತೆಯನ್ನು ಸಂಶಯದಿಂದ ಹಳಿದು ಹಿಂಸೆ ಮಾಡುತ್ತಾನೆ. ತನ್ನ ಜೀವನದ ಬಗ್ಗೆ ಯಾವ ಗುರಿಯನ್ನು ಇಟ್ಟು ಕೊಂಡಿರದ ಪೂರ್ಣಿಮಾ ಅವಣ ದೌರ್ಜನ್ಯಗಳನ್ನು ಸಹಿಸಲಾಗದೇ ಅವನಿಂದ ದೂರವಾಗುತ್ತಾಳೆ. ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಬಾಳಿನ  ಈ ಅಧ್ಯಾಯಕ್ಕೆ ತೆರೆ ಎಳೆದು ಕೊಳ್ಳುತ್ತಾಳೆ.


ಆದರೆ ಅನಂತರ ಅವಳ ಜೀವನದ ಇನ್ನೊಂದು ಆದ್ಯಾಯದ ಪುಟಗಳು ತೆರೆದುಕೊಳ್ಳುತ್ತವೆ. ದಿವಾಕರನೊಡನೆ ಅವಳ ಸ್ನೇಹ ಪ್ರಾರಂಬವಾಗುತ್ತದೆ. ಅಪೂರ್ಣವಾಗಿದ್ದ ಪೂರ್ಣಿಮಾಳನ್ನು ಅವನು ಸಂಪೂರ್ಣದಡೆಗೆ ಕೊಂಡೋಯ್ಯತ್ತಾನೆ.


ಹೆಣ್ಣಾಗಲೀ, ಗಂಡಾಗಲೀ ಹುಟ್ಟಿದ ಮೇಲೆ ಬದುಕಲೇ ಬೇಕು, ಬದುಕಿಗೆ ಮಾರ್ಗಗಳನ್ನು ಕಂಡುಕೊಳ್ಳಲೇ ಬೇಕು, ಸಮಾಜದ ವ್ಯವಸ್ಥೆಗಳ್ನನ್ನು ಅನುಕೂಲ, ಅನಾನುಕೂಲಗಳ ನಡುವೆ ಜೀವನಕ್ಕೆ ಅಳವಡಿಸಿಕೊಂಡು ಮುಂದುವರೆಯಬೇಕು. ಈ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕು. ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ. ದಿಟ್ಟತನದಿಂದ ಎಡರು ತೊಡರುಗಳನ್ನು ಪರಿಗಣಿಸದೇ ಜೀವನವನ್ನು ಮುಂದುವರೆಸುವ ನಿಲುವನ್ನು ತೋರುವ ಒಬ್ಬ ಹುಡುಗಿಯ ಕತೆಯೇ ಈ ಕಾದಂಬರಿಯ ಕಥಾವಸ್ತು,


ಮೊದಲು ಮಾನವನಾಗು

" ಮೊದಲು ಮಾನವನಾಗು"  ಉಷಾ ನವರತ್ನರಾಮ್ ರವರ  ಒಂದು ಉತ್ತಮ, ಭಾವನಾತ್ಮಕ ಸಾಮಾಜಿಕ ಕಾದಂಬರಿ,

ಈ ಕಾದಂಬರಿಯ ಮುನ್ನುಡಿ, 

ಡಾಕ್ವ್ರರ್ ಗಳು  ದೇಹದಲ್ಲಿನ ಕಾಯಿಲೆಗಳಗೆ  ಔಷದಿ ಕೊಡ್ತಾರೆ. ಚಿಕಿತ್ಸೆ ನೀಡುತ್ತಾರೆ. ಶಸ್ರ್ರ ಚಿಕಿತ್ಸೆ ಮಾಡುವಾಗ ಕಾಯಿಲೆ ಅಂಟಿರುವ ಭಾಗವನ್ನು ಕತ್ತರಿಸಿ ಹಾಕುತ್ತಾರೆ. ಈಗ ವಿಜ್ಙಾನ  ಎಷ್ಟು ಮುಂದುವರೆದಿದೆ ಎಂದರೆ ಎಂತಹ ಭಯಂಕರ ಕಾಯಿಲೆ ಬಂದರೂ ಅದಕ್ಕೆ ಚಿಕಿತ್ಸೆ ನೀಡಿ ವಾಸಿ ಮಾಡುವ ಶಕ್ತಿಯಿದೆ. ಆದರೆ ಈ ಚಿಕಿತ್ಸೆ ಆದ ರೋಗಿ ಮಾನಸಿಕವಾಗಿ ತುಂಬಾ ಬಳಲುತ್ತಾನೆ ಎಂಬುದನ್ನು ಮರೆಯುತ್ತಾರೆ.


ಈ ಕಾದಂಬರಿಯಲ್ಲಿ ಒಬ್ಬ ಹುಡುಗನ ಕೊಳೆತ ಕಾಲನ್ನು ಕತ್ತರಿಸಿ ಹಾಕಲಾಯಿತು, ಆಗ ಹುಡುಗ ಅಳುತ್ತಿದ್ದ. ಬರಿಯ ನೋವಿನಿಂದ ಮಾತ್ರವಲ್ಲ, ತಾನು ಮುಂದೆ ಎದುರಿಸಬೇಕಾದ ಬದುಕನ್ನು ನೆನೆದು ಅಳುತ್ತಿದ್ದ. ತಾನು ಕುಂಟ-ಅಂಗವಿಕಲ ಅನ್ನೂದನ್ನು ಅವನು ಎದುರಿಸಬೇಕಾಗಿತ್ತು. ಕೃತಕ ಕಾಲಗಳ ಜೋಡಣೆಯಾದರೂ ಕೂಡ ಅವನು ಮೊದಲಿನ ವ್ಯಕ್ತಿ ಅಲ್ಲ,

ಈ ಸಂಧರ್ಭದಲ್ಲಿ ಡಾಕ್ಟ್ರರ್ ಗಳು ಎಷ್ಟೇ ಧೈರ್ಯ ಹೇಳಿದರೂ ಸಹ  ಇದು ಯಾವ ರೀತಿಯಲ್ಲಿ ಸಹಾಯ, ಸಹಕಾರ ನೀಡಬಲ್ಲದು, ಎಂಬುದು ಈ ಕಾದಂಬರಿಯಲ್ಲಿನ ಡಾಕ್ಟ್ರರ್ ಪುರುರವರ ವಾರದ, " ನಾವು ತಜ್ಣ ವೈದ್ಯರು, ಸರ್ಜನ್ ಗಳು, ಅದರೊಂದಿಗೆ ನಾವು ಮಾನವರು ಕೂಡ!"

ಚಿಕ್ಕವಯಸ್ಸಿನ ಬದುಕಿನ ಹೊಂಗನಸು ಹೊತ್ತು ವೈವಾಹಿಕ ಜೀವನದ ಮೆಟ್ಟಲೇರಲು ಹವಣಿಸುತ್ತಿದ್ದ ಪೂಜಿತಾಳಿಗೆ ಶಸ್ರ್ರಚಿಕಿತ್ಸೆಯಲ್ಲಿ ಅವಳ ಹೆಣ್ತತನ ತಾಯ್ತನದ ಬಲಿಯಾಗುತ್ತದೆ. ಅದನ್ನು ಅವಳು ಹೇಗೆ ಎದುರಿಸುತ್ತಾಳೆ? ಅದರಿಂದ ಅವಳ ಸುತ್ತಮುತ್ತಲಿನ ವ್ಯಕ್ತಿಗಳ ಬದುಕಿನಲ್ಲಿ ಬಿರುಗಾಳಿಯೇಕೆ ಏಳುತ್ತದೆ ಎನ್ನುವುದೇ ಕಾದಂಬರಿಯ ಕಥೆ,

ಈ ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರಗಳು "
ಡಾ! ಪುರು, ಡಾ! ಸಂಕಲ್ಪ
ಡಾ! ದಿನಕರ್ ಡಾ! ಭಾರ್ಗವ
ಸದಾನಂದ, ಪೂಜಿತಾ