Friday 28 October 2011

ಜ್ಯೋತಿ-ಕಿರಣ

" ಜ್ಯೋತಿ-ಕಿರಣ" ಕೌಟುಂಬಿಕ ಪಾತ್ರಗಳನ್ನಳಗೊಂಡು ಪದ್ಮ ಶ್ರೀಧರ್ ರವರಿಂದ ರಚಿತವಾಗಿರುವ ಸಾಮಾಜಿಕ ಕಾದಂಬರಿ. ಯೌವನಕ್ಕೆ ಪದಾರ್ಪಣೆ ಮಾಡಿ, ಅರೆಬರೆ ತಿಳುವಳಿಕೆಯ ಹುಡುಗಿಯೊಬ್ಬಳು(ಕಥಾ ನಾಯಕಿ-ಪೂರ್ಣಿಮಾ), ಯುವಕನೊಬ್ಬನ ಪ್ರೀತಿಯ  ಸೆಳತಕ್ಕೆ ಸಿಕ್ಕಿಬಿದ್ದು, ಅವನನ್ನು ಪ್ರೀತಿಸುವುದಲ್ಲದೇ ಅವನ ಕಾಮದ  ಆಸೆಗೆ ಮಣಿದು, ಅವನನ್ನು ನಂಬಿ, ಅವನಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾಳೆ. ನಂತರ ಹಿರಿಯರ ಮಧ್ಯಸ್ತಿಕೆಯಿಂದ ಹೇಗೋ ಮದುವೆಯಾಗುತ್ತಾಳೆ, ಆದರೆ ಅವಳ ಬಾಳ ಪಯಣದ ಅರಂಭವೇ ನಿರಾಸೆಯನ್ನುಂಟು ಮಾಡುತ್ತದೆ. ಅವಳ  ಆಸೆ-ಆಕಾಂಕ್ಷೆಗಳು ಕುಸಿಯುತ್ತವೆ. ಬಾಳು ಪ್ರಾರಂಭವಾಗುವ ಮೊದಲೇ ಮುಗಿದು ಹೊಗುವ ಸಂಭವಗಳು ಎದುರಾಗುತ್ತವೆ. ಕಥಾನಾಯಕ ಚಂದ್ರನಿಗೆ ಅವಳ ಮೇಲಿನ ಆಕರ್ಷಣೆ ಕಡಿಮೆಯಾದ ನಂತರ ಅವಳನ್ನು ತಿರಸ್ಕಾರದಿಂದ ನೋಡುತ್ತಾನೆ. ಅವಹೇಳನ ಮಾಡುತ್ತಾನೆ. ಅವಳ ನಡತೆಯನ್ನು ಸಂಶಯದಿಂದ ಹಳಿದು ಹಿಂಸೆ ಮಾಡುತ್ತಾನೆ. ತನ್ನ ಜೀವನದ ಬಗ್ಗೆ ಯಾವ ಗುರಿಯನ್ನು ಇಟ್ಟು ಕೊಂಡಿರದ ಪೂರ್ಣಿಮಾ ಅವಣ ದೌರ್ಜನ್ಯಗಳನ್ನು ಸಹಿಸಲಾಗದೇ ಅವನಿಂದ ದೂರವಾಗುತ್ತಾಳೆ. ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಬಾಳಿನ  ಈ ಅಧ್ಯಾಯಕ್ಕೆ ತೆರೆ ಎಳೆದು ಕೊಳ್ಳುತ್ತಾಳೆ.


ಆದರೆ ಅನಂತರ ಅವಳ ಜೀವನದ ಇನ್ನೊಂದು ಆದ್ಯಾಯದ ಪುಟಗಳು ತೆರೆದುಕೊಳ್ಳುತ್ತವೆ. ದಿವಾಕರನೊಡನೆ ಅವಳ ಸ್ನೇಹ ಪ್ರಾರಂಬವಾಗುತ್ತದೆ. ಅಪೂರ್ಣವಾಗಿದ್ದ ಪೂರ್ಣಿಮಾಳನ್ನು ಅವನು ಸಂಪೂರ್ಣದಡೆಗೆ ಕೊಂಡೋಯ್ಯತ್ತಾನೆ.


ಹೆಣ್ಣಾಗಲೀ, ಗಂಡಾಗಲೀ ಹುಟ್ಟಿದ ಮೇಲೆ ಬದುಕಲೇ ಬೇಕು, ಬದುಕಿಗೆ ಮಾರ್ಗಗಳನ್ನು ಕಂಡುಕೊಳ್ಳಲೇ ಬೇಕು, ಸಮಾಜದ ವ್ಯವಸ್ಥೆಗಳ್ನನ್ನು ಅನುಕೂಲ, ಅನಾನುಕೂಲಗಳ ನಡುವೆ ಜೀವನಕ್ಕೆ ಅಳವಡಿಸಿಕೊಂಡು ಮುಂದುವರೆಯಬೇಕು. ಈ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕು. ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ. ದಿಟ್ಟತನದಿಂದ ಎಡರು ತೊಡರುಗಳನ್ನು ಪರಿಗಣಿಸದೇ ಜೀವನವನ್ನು ಮುಂದುವರೆಸುವ ನಿಲುವನ್ನು ತೋರುವ ಒಬ್ಬ ಹುಡುಗಿಯ ಕತೆಯೇ ಈ ಕಾದಂಬರಿಯ ಕಥಾವಸ್ತು,


No comments:

Post a Comment